ಬಾಲ್ಯದಿಂದಲೂ ಮನದಾಳದಲ್ಲಿ ಅಡಗಿದ್ದ ಸುಪ್ತ ಬಯಕೆಯನ್ನು ಸಾಕಾರಗೊಳಿಸಲು ಪ್ರೇರಣೆ ಮತ್ತು ಅವಕಾಶ ಸಿಕ್ಕಾಗ ,ಕಲ್ಲಿನಲ್ಲಿ ಕವಿತೆಯರಳಿಸುವ ಛಾತಿ ನಮ್ಮಲ್ಲಿದ್ದಾಗ ಪ್ರತಿ ಅನುಭವವನ್ನೂ ಗೆಲುವಿನ ಮೆಟ್ಟಿಲಾಗಿಸುವ ಛಲ ಇದ್ದಲ್ಲಿ ಗೆಲುವು ನಮ್ಮದಾಗುತ್ತದೆ. ಸಪ್ತ ಸಾಗರದಾಚೆಯ ಸುಪ್ತಸಾಗರದೆಡೆಗಿನ ಪ್ರಯಾಣ, ನಮ್ಮ ಪ್ರಯಾಸಕ್ಕೆ ಸಂದ ಫಲವಾಗಿರುತ್ತದೆ.
ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣೆಸಾದುತ್ತಿರುವ ದೀಪಗಳ ನಡುವೆ ತನ್ನನ್ನು ತಾನು ರಕ್ಷಿಸಿಕೊಂಡು ಪ್ರಕಾಶಮಾನವಾಗಿ ಉರಿದು ಪ್ರಭೆಯನ್ನು ನೀಡುವುದು ಸುಲಭದ ಮಾತಲ್ಲ. ಒಂದು ಸುಂದರ ಬೆಳಗು ಜನ್ಮಿಸಲು ಲಕ್ಷಲಕ್ಷ ತಾರೆಗಳ ಬಲಿಯಾಗಬೇಕಷ್ಟೇ !!
ಬ್ರಹ್ಮಾಂಡದ ಪ್ರತಿಯೊಂದು ಜೀವಿಯಲ್ಲೂ ಪ್ರತಿಭೆ, ಸಾಮರ್ಥ್ಯ ಇದ್ದೇ ಇರುತ್ತದೆ. ಸಾಮರ್ಥ್ಯ ಅನ್ನುವುದು ನಮ್ಮ ಇಚ್ಚೆಯ ಮತ್ತೊಂದು ಹೆಸರಷ್ಟೇ, ಎಲ್ಲರಲ್ಲೂ ಅವರವರ ಇಚ್ಚೆಗೆ ಅನುಗುಣವಾಗಿ ಇರುತ್ತದೆ . ಸಾಗರದ ಆಳ ,ಆಕಾಶದೆತ್ತರ , ಜಗದಗಲ … ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿಭೆ ಅನ್ನುವುದು ಹೂವಿನಲ್ಲಿರುವ ಪರಿಮಳದಂತೆ. ಕೆಲವು ಘಾಡ. ಮತ್ತೆ ಕೆಲವು ಮಂದ ಮೋಹಕ. ತಂಗಾಳಿ ಬೀಸಿದಾಗ ಮಾತ್ರ ನಮ್ಮ ಅನುಭವಕ್ಕೆ ಬರುವಂತಹವು.
ಜ್ಞಾನದ ಅರಿವಿನೆಡೆಗೆ ಸಾಗಲು, ನಮ್ಮ ಕಲ್ಪನೆಗೆ ಸಾಕಾರ ರೂಪ ಕೊಡಲು ತಕ್ಕುದಾದ ಪರಿಸರ, ಶ್ರಮ ಬೇಕಷ್ಟೇ. ಆಗಲೇ ಸುಂದರ ಬೆಳಗಿನ ಸುಂದರ ನಗುವಿನ ಅನುಭವ, ಅರಿವು ನಮಗಾಗುತ್ತದೆ .
ಕಮಲಬೆಲಗೂರ್.
ಮೂಲ ಕೃತಿ.
If you have a wing …not enough…
When we have the motivation and opportunity to embody the latent desire that has been hidden from childhood. since…
View original post 156 more words

Leave a comment